ಕಳೆದೆರಡು ದಿನಗಳಿಂದ ಸ್ಯಾಂಡಲ್ವುಡ್ನಲ್ಲಿ ಶಿವಾಜಿ ಬಯೋಪಿಕ್ ಸಿನಿಮಾ ಸದ್ದು ಮಾಡ್ತಿದೆ. ಬಾಲಿವುಡ್ ನಿರ್ದೇಶಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಕಟ್ಟಿಕೊಡಲು ಮುಂದಾಗಿದ್ದಾರೆ. ಆದರೆ ಕನ್ನಡ ನಟ ರಿಷಬ್ ಶೆಟ್ಟಿ ಚಿತ್ರದಲ್ಲಿ ಶಿವಾಜಿ ಮಹಾರಾಜರರ ಪಾತ್ರ ಮಾಡುತ್ತಿರುವುದು ಚರ್ಚೆ ಹುಟ್ಟಾಕ್ಕಿದೆ.
ರಿಷಬ್ ಶೆಟ್ಟಿ ಆಯ್ಕೆ ಸರಿಯಿಲ್ಲ, ಈ ಚಿತ್ರ ಮಾಡುವುದು ಬೇಕಿರಲಿಲ್ಲ, ಶಿವಾಜಿ ಕನ್ನಡ ನಾಡಿಗೆ ಕೊಟ್ಟ ಕೊಡುಗೆ ಏನು? ಇದಕ್ಕಿಂತ ಕನ್ನಡದ ಮಹಾನ್ ನಾಯಕರ ಸಿನಿಮಾ ಮಾಡಬಹುದು, ಗೆದ್ದಮೇಲೆ ಕನ್ನಡವನ್ನು ಮರೆಯುವುದು ಸರಿಯಲ್ಲ, ಹೀಗೆ ನಾನಾ ರೀತಿಯ ಕಾಮೆಂಟ್ಸ್ ಬರುತ್ತಿದೆ. ಸಾಕಷ್ಟು ಜನ ಬೇಸರ ಹೊರಹಾಕಿ ಪೋಸ್ಟ್ ಮಾಡುತ್ತಿದ್ದಾರೆ. ಬಾಯ್ಕಾಟ್ ಮಾಡುವುದಾಗಿಯೂ ಎಚ್ಚರಿಕೆ ನೀಡುತ್ತಿದ್ದಾರೆ